Friday, January 22, 2010

ಗ್ರಹಗಳು.

ಆಕಾಶ, ಸೂರ್ಯ, ಚಂದ್ರ ನಕ್ಷತ್ರಗಳ ಬಗ್ಗೆ ಬಹಳ ಕುತೂಹಲ ಇದ್ದ ಧ್ರುವನಿಗೆ
ಖಗೋಳದ ಬಗೆಗಿನ ಒಂದು ಪುಸ್ತಕ ತಂದು ಕೊಟ್ಟೆ.
ಪ್ರತಿ ದಿನ ಒಂದು ಪುಸ್ತಕ ಓದಿ ಹೇಳುವುದು ರೂಢಿ.
ಈ ಪುಸ್ತಕ ಬಂದ ಮೇಲೆ ಅದರ ಬಗ್ಗೆ ಪ್ರತಿ ದಿನ ಪ್ರಶ್ನೆಗಳು.
ಅದಕ್ಕೆ ನಮ್ಮ ಉತ್ತರ.
ಅದರಲ್ಲಿ ಗ್ರಹಗಳ ಚಿತ್ರ ಮತ್ತು ಹೆಸರುಗಳು ಇದ್ದದ್ದನ್ನು ಓದಿ ಹೇಳ್ತಾ ಇದ್ದೆ.
೨ ಸಲ ಹೇಳಿದ ನಂತರ ಮೂರನೇ ಸಲ ಅವನೇ ಹೇಳತೊಡಗಿದ.
ಹೇಳುವಾಗ ನಾನೊಂದು ತಪ್ಪು ಮಾಡಿದ್ದೆ.
ಪುಸ್ಥಕದಲ್ಲಿತ್ತು, ೯ ಗ್ರಹಗಳೆಂದು. ಪ್ಲುಟೊ ಹೆಸರು ಕೂಡ ಇತ್ತು. ಅದನ್ನ ಹಾಗೆ ಹೇಳಿದ್ದೆ.
ಆದರೆ ಈಗ ಗ್ರಹಗಳು ೮ ಮಾತ್ರ. ಪ್ಲುಟೊ ಲೆಕ್ಕದಿಂದ ಹೊರಗೆ ಇರುವುದು ಮರೆತೇ ಹೋಗಿತ್ತು.
ಮರುದಿವಸ ನೆನಪಾಗಿ ಧ್ರುವ ನ ಬಳಿ ಹೇಳಿದೆ, ಪ್ಲುಟೊ ಗ್ರಹ ಅಲ್ಲ. ೯ಗ್ರಹ ಅಲ್ಲ, ೮ ಗ್ರಹಗಳಷ್ಟೇ ಇರುವುದು.

ಆದರೆ ಗ್ರಹಗಳ ಹೆಸರು ಹೇಳುವಾಗ ಧ್ರುವ ನಿಗೆ ಕೊನೆಯ ಪ್ಲುಟೊ ಬಿಡಲು ಮನಸ್ಸೇ ಇಲ್ಲ.
ನೆಪ್ಚೂನ್ ಹೇಳಿದ ನಂತರ ಪ್ರತಿ ಸಲ ಕೇಳ್ತಾನೆ, ಅಮ್ಮ, ಪ್ಲುಟೊ ಹೇಳಲಾ?
ಕೊನೆಗೆ ಗೊತ್ತಾಯ್ತು, ಪ್ಲುಟೊ ಅಂದ್ರೆ ಯಾಕಷ್ಟು ಇಷ್ಟ ಅಂತ...
ಯಾಕಂದ್ರೆ, ಮಿಕ್ಕಿ ಮೌಸ್ ಜೊತೆಗೆ ಒಂದು ನಾಯಿ ಇದೆ, ಅದರ ಹೆಸರು ಪ್ಲುಟೊ.
ಮಿಕ್ಕಿ ಮೌಸ್, ಮತ್ತು ಪ್ಲುಟೊ ಅಂದ್ರೆ ಧ್ರುವ ನಿಗೆ ಬಹಳ ಇಷ್ಟ.

No comments:

Post a Comment