Friday, January 22, 2010

ಪ್ರಶ್ನೆ

ಮಕ್ಕಳ ಮನಸ್ಸಲ್ಲಿ ಮೂಡುವ ಕುತೂಹಲ ಎಷ್ಟಿರುತ್ತದೆ ಅನ್ನುವುದಕ್ಕೆ ನಾನು ಒಂದು ವಿಷಯದ ಬಗ್ಗೆ ಹೇಳುವಾಗ ಧ್ರುವನಲ್ಲಿ ಮೂಡಿದ ಪ್ರಶ್ನೆ ಸಾಕ್ಷಿ.
ಗ್ರಹಗಳ ಬಗ್ಗೆ, ಸೂರ್ಯ ಗ್ರಹಣದ ಬಗ್ಗೆ ಚಂದ್ರಗ್ರಹಣದ ಬಗ್ಗೆ ಧ್ರುವ ಮತ್ತು ನಾನು ಮಾತನಾಡುತ್ತ ಇರುವಾಗ ಧ್ರುವ ಕೇಳಿದ,
ಅಮ್ಮ ಸೂರ್ಯಗ್ರಹಣಕ್ಕೆ ಇಂಗ್ಲಿಷ್ ನಲ್ಲಿ ಏನು ಹೇಳ್ತಾರೆ? ನಾನು ಹೇಳಿದೆ, "solar eclipse".
"ಚಂದ್ರ ಗ್ರಹಣಕ್ಕೆ ??" ಕೂಡಲೇ ಇನ್ನೊಂದು ಪ್ರಶ್ನೆ,
"lunar eclipse" ಉತ್ತರ ಹೇಳಿದೆ.
ಕೂಡಲೇ ಅವನಿಂದ ಇನ್ನೊದು ಪ್ರಶ್ನೆ , "ಮತ್ತೆ ಭೂಮಿ ಗ್ರಹಣಕ್ಕೆ?"
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಮಾತ್ರ ಆಗಲು ಸಾಧ್ಯ ಎನ್ನುವುದನ್ನ ವಿವರಿಸಿ ಹೇಳಿದ ಮೇಲೆ ಆ ಕುತೂಹಲ ಕಡಿಮೆ ಆಯಿತು.


ಇನ್ನೊಂದು ಸಂದರ್ಭ : ಊಟ ಮಾಡಿದ ನಂತರ ಮೊಸರನ್ನು ಫ್ರಿಡ್ಜ್ ನಲ್ಲಿ ಇಡುವಾಗ ಧ್ರುವನ ಪ್ರಶ್ನೆ ಬಂತು.
ಅಮ್ಮ, ಮೊಸರು ಯಾಕೆ ಫ್ರಿಡ್ಜ್ ನಲ್ಲಿ ಇಡ್ತಾ ಇದ್ದಿ?
ಪ್ರ : ಪುಟ್ಟ, ಮೊಸರು ಫ್ರಿಡ್ಜ್ ಲ್ಲಿ ಇಟ್ರೆ ಹುಳಿ ಆಗುದಿಲ್ಲ.
ಉ :ಫ್ರಿಡ್ಜ್ ಲ್ಲಿ ಇಟ್ಟರೆ ಯಾಕೆ ಹುಳಿ ಆಗಲ್ಲ?
ಪ್ರ :ಫ್ರಿಡ್ಜ್ ಲ್ಲಿ ಕಡಿಮೆ ಉಷ್ಣತೆ ಇರುವ ಕಾರಣ ಹುಳಿ ಆಗಲ್ಲ.
ಉ :ಯಾಕೆ ಕಡಿಮೆ ಉಷ್ಣತೆ ಇದೆ ಫ್ರಿಡ್ಜ್ ನಲ್ಲಿ?

ಸರಿ, ಇದಕ್ಕೆ ನಾವಿಬ್ರೂ ಸೇರಿ ಒಂದು ಪ್ರಯೋಗ ಮಾಡಿದೆವು.
ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ಮೊಸರನ್ನು ತೆಗೆದು ಫ್ರಿಡ್ಜ್ ನ ಹೊರಗಿನ ವಾತಾವರಣದಲ್ಲಿ ಇಟ್ಟೆವು.
ಆ ರಾತ್ರಿ ಹೊರಗಿಟ್ಟ ಮೊಸರನ್ನು ರುಚಿ ನೋಡಲು ಕೊಟ್ಟೆ. ಫ್ರಿಡ್ಜ್ ನಲ್ಲಿರುವುದನ್ನೂ ಸ್ವಲ್ಪ ಕೊಟ್ಟೆ.
ರುಚಿ ನೋಡಿ ಹೌದು, ಹುಳಿ, ಹುಳಿ ಇಲ್ಲದ್ದು ಅಂತ ಹೇಳಿ ವ್ಯತ್ಯಾಸ ತಿಳಿದ ನಂತರ ಅವನಿಗೂ ಸಮಾಧಾನ, ನನಗೂ ಸಹ.

No comments:

Post a Comment