ನನ್ನ ಮತ್ತು ಧ್ರುವನ ನಡುವೆ ಈ ಸಂಭಾಷಣೆ ನಡೆದದ್ದು ಜೂನ್ ತಿಂಗಳ ಮೊದಲ ವಾರದಲ್ಲಿ.
ದಿನಂಪ್ರತಿ ಧ್ರುವ ಶಾಲೆಯಿಂದ ಬಂದ ಕೂಡಲೇ ಆ ದಿವಸದ ಶಾಲೆಯ ಚಟುವಟಿಕೆಗಳ ಬಗ್ಗೆ ಕೇಳುವ ಅಭ್ಯಾಸ ನನ್ನದು. ಎಂದಿನಂತೆ ಆ ದಿವಸವೂ ಕೇಳಿದೆ, ಅವನೂ ಎಂದಿನಂತೆಯೇ ಹೇಳಿದ, " ಅಮ್ಮ, ಬಸ್ ಹತ್ತುವಾಗ ನೆನಪಿತ್ತು... ಇಲ್ಲಿಗೆ ತಲುಪುವಾಗ ಮರೆತು ಹೋಯಿತು. " ಧಾಟಿ ಬದಲಿಸಿ ಕೇಳಿದೆ, "ನಿನ್ನೆ ನೀನು ಆರಭಿ ಹತ್ರ ಕೂತಿದ್ದೆ ಅಲ್ವಾ... ಇವತ್ತು ಯಾರ ಹತ್ರ ಕೂತ್ಕೊಂಡೆ...? "
ತಕ್ಷಣ ಉತ್ತರ ಬಂತು, " ಇವತ್ತು ಒಂದು ಬದಿಯಲ್ಲಿ ಶುಭಾಂಗ್ , ಇನ್ನೊದು ಬದಿಯಲ್ಲಿ.... ಇನ್ನೊಂದು ಬದಿಯಲ್ಲಿ... "
ಮಾತು "ಇನ್ನೊಂದು ಬದಿಯಿಂದ" ಮುಂದೆ ಹೋಗಲೇ ಇಲ್ಲ. ಇನ್ನೊಂದು ಬದಿಯಲ್ಲಿ ಯಾರು ಕುಳಿತದ್ದು ಎಂದು ಪುನಃ ಪ್ರಶ್ನೆ ಮಾಡಿದಾಗ ಮಾತು ಮುಂದುವರೆಯಿತು.
ಇನ್ನೊಂದು ಬದಿಯಲ್ಲಿ ಕುಳಿತಿದ್ದ ಮಗುವಿನ ಹೆಸರು ಗೊತ್ತಿಲ್ಲ, ಕೂದಲು ಧ್ರುವ ಕೂದಲಿನ ಹಾಗೆ ಸಣ್ಣಗೆ ಇದೆ, ಆದರೆ ಅಮ್ಮನ ಹಾಗೆ ಕಿವಿಯಲ್ಲಿ ಪುಟ್ಟ ರಿಂಗ್ ಇದೆ! ಈಗ ಒಂದು ಸಂದೇಹ, ಪಕ್ಕದಲ್ಲಿ ಕುಳಿತದ್ದು ಹುಡುಗನೋ... ಹುಡುಗಿಯೋ..?!!
ಆದರೆ ಈಗ ಆ ಸಂದೇಹಕ್ಕೆ ಉತ್ತರ ಸಿಕ್ಕಿದೆ, ಆವತ್ತಿನ ದಿವಸ ಪಕ್ಕದಲ್ಲಿ ಕುಳಿತದ್ದು ನೀಹಾಲ್ ಹೆಸರಿನ ಹುಡುಗ. :-)
Thursday, July 29, 2010
Subscribe to:
Post Comments (Atom)
No comments:
Post a Comment