Thursday, May 14, 2009
ನಿಜವಾದ ಬಸ್
ನಾನು, ಧ್ರುವ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಧ್ರುವ ಕೇಳಿದ "ಅಮ್ಮ, ಆ ಬಸ್ ನೋಡಿದೆಯ?" . ನಾನು ಆ ಬಸ್ಅನ್ನು ಗಮನಿಸಿರಲಿಲ್ಲ. ಧ್ರುವನಿಗೆ ಹೇಳಿದೆ, ಗಮನಿಸಲ್ಲಿಲ್ಲ ಪುಟ್ಟ, ಹೇಗಿದೆ ಅದು ?? ಅದಕ್ಕೆ ಬಸ್ ಹೇಗಿದೆ ಅಂತ ವಿವರಿಸುವುದಕ್ಕೆ ಗೊತ್ತಾಗದೆ, ಒಂದು ಕ್ಷಣ ಯೋಚಿಸಿ ಧ್ರುವ ಉತ್ತರಿಸಿದ - "ನಿಜವಾದ ಬಸ್ ಅಮ್ಮ ಅದು".
Tuesday, May 12, 2009
ನಾನು ಧ್ರುವ .
ಇದು ನಡೆದದ್ದು ಸಿಂಗಪುರದಲ್ಲಿ. ಧ್ರುವ ಪ್ಲೇ ಹೋಂ ಗೆ ಹೋಗುತ್ತಿದ್ದಾಗ ಅವನ ಸ್ನೇಹಿತರ ಅಮ್ಮ, ಅಜ್ಜಿಯಂದಿರು ಧ್ರುವ ನನ್ನು ನೋಡಿ "handsome boy" ಅಂತ ಹೇಳ್ತಾ ಇದ್ರು. ಇದಕ್ಕೆ ಧ್ರುವನಿಗೆ ಯಾವಾಗಲೂ ಕೋಪ, "ನಾನು handsome boy ಅಲ್ಲ, ನಾನು ಧ್ರುವ" ಎನ್ನುತ್ತಿದ್ದ.
ಇದೇ ರೀತಿಯ ಘಟನೆ ನನ್ನ ಅಕ್ಕನ ಮನೆಯಲ್ಲಿ - ಅಕ್ಕ ಧ್ರುವನನ್ನು ಮುದ್ದು ಮಾಡಿ, ನನ್ನ ಚಾಮಿ ದೇವರು (ಸ್ವಾಮಿ ದೇವರು) ಅಂತ ಹೇಳಿದಾಗ ಧ್ರುವ ಹೇಳಿದ "ನಾನು ಚಾಮಿ ದೇವರಲ್ಲ, ನಾನು ಧ್ರುವ".
ಇದೇ ರೀತಿಯ ಘಟನೆ ನನ್ನ ಅಕ್ಕನ ಮನೆಯಲ್ಲಿ - ಅಕ್ಕ ಧ್ರುವನನ್ನು ಮುದ್ದು ಮಾಡಿ, ನನ್ನ ಚಾಮಿ ದೇವರು (ಸ್ವಾಮಿ ದೇವರು) ಅಂತ ಹೇಳಿದಾಗ ಧ್ರುವ ಹೇಳಿದ "ನಾನು ಚಾಮಿ ದೇವರಲ್ಲ, ನಾನು ಧ್ರುವ".
Monday, May 11, 2009
ಲೆಕ್ಕ....
ಮೂರೂವರೆ ವರ್ಷದ ಮಗ ೧ ರಿಂದ ೧೦೦ ರವರೆಗೆ ಎಣಿಸುತ್ತ ಇದ್ದ. ಫಾರ್ಟಿ ಏಯ್ಟ್, ಫಾರ್ಟಿ ನೈನ್, ಫಾರ್ಟಿ ಟೆನ್......
ಇನ್ನೊಂದು ಬಾರಿ ಏಣಿಸುತ್ತ ಇದ್ದ ರೀತಿ -- ಟೆನ್, ಟ್ವೆಂಟಿ, ಥರ್ಟಿ , ಫಾರ್ಟಿ, ಫೈವ್ ಟೀ .....
ಇನ್ನೊಂದು ಬಾರಿ ಏಣಿಸುತ್ತ ಇದ್ದ ರೀತಿ -- ಟೆನ್, ಟ್ವೆಂಟಿ, ಥರ್ಟಿ , ಫಾರ್ಟಿ, ಫೈವ್ ಟೀ .....
ಧ್ರುವ ಅಪ್ಪನ ಆಫೀಸ್ ಗೆ ಹೋದದ್ದು....
ಸಿಂಗಾಪುರದ ಮುಸ್ತಫಾ ಶಾಪಿಂಗ್ ಮಳಿಗೆಯಲ್ಲಿ ಮಕ್ಕಳ ಆಟಿಕೆಗಳ ಜಾಗ ಬಹಳ ಇಷ್ಟ ಧ್ರುವನಿಗೆ. ಅಪ್ಪ ದಿನಂಪ್ರತಿ ಕಛೇರಿಗೆ ಹೋಗುವಾಗ "ಅಪ್ಪನ ಆಫೀಸ್ ಗೆ ಹೋಗ್ತೇನೆ" ಎನ್ನುವ ಹಠ. ಏನೇನೋ ಹೇಳಿ ಸಮಾಧಾನ ಮಾಡಿಸುತ್ತಿದ್ದೆ. ಅಪ್ಪನ ಆಫೀಸ್ ಗೆ ಹೋಗ್ಬೇಕು ಎನ್ನುವ ಹಠ ಏಕೆ ಅಂತ ಕೊನೆಗೊಂದು ದಿವಸ ಗೊತ್ತಾಯ್ತು. ಮುಸ್ತಫಾ ಆಟಿಕೆಗಳ ಜಾಗ ಅಪ್ಪನ ಕಛೇರಿ ಎನ್ನುವ ಭಾವನೆ ಧ್ರುವನಿಗೆ. ಅವನ ಉದ್ದೇಶ ಅಲ್ಲಿಗೆ ಹೋಗುವುದಿತ್ತು. ಕೊನೆಗೆ ಇದು ಅಪ್ಪನ ಆಫೀಸ್ ಅಲ್ಲ, ಅಪ್ಪನ ಆಫೀಸ್ ನಲ್ಲಿ ಇರೋದು ಕಂಪ್ಯೂಟರ್ ಮಾತ್ರ, ಆಟಿಕೆ ಇಲ್ಲ, ಅಂತ ವಿವರಿಸಿ ಅರ್ಥ ಮಾಡಿಸಿದೆವು. ಇದಾದ ನಂತರ ಯಾವತ್ತೂ ಅಪ್ಪನ ಆಫೀಸ್ ಗೆ ಹೋಗಬೇಕು ಎನ್ನುವ ಮಾತಿಲ್ಲ. ......
ಧ್ರುವ - ೧೪ ತಿಂಗಳ ಮಗು.
ನಮ್ಮ ಮನೆಯ ಅಡುಗೆ ಕೋಣೆಯ ಗೋಡೆಯಲ್ಲಿ ಅಡುಗೆ ಉಪಕರಣಗಳ ಚಾರ್ಟು ಮಾಡಿ ಅಂಟಿಸಿಧ್ಧೆ. ಅದರಲ್ಲಿ ಪ್ರೆಶರ್ ಕುಕ್ಕರ್ ನ ಚಿತ್ರ ಇತ್ತು. ಆದರೆ ಅದಕ್ಕೆ ವೈಟ್ ಇರಲಿಲ್ಲ. ಇದನ್ನು ಗಮನಿಸಿದ ನಮ್ಮ ಪುಟ್ಟು ಮಗ. ಆಗ ಮಾತನಾಡಲು ಬರುತ್ತಿರಲಿಲ್ಲ. ಕೈಯ್ಯಲ್ಲಿ ಕುಕ್ಕರ್ ವೈಟ್ ಇಡುವ ಜಾಗ ತೋರಿಸಿ ಕೊಡುವಂತೆ ಕೇಳಿದ, ಕೊಟ್ಟೆ. ಅಲ್ಲಿ ಚಾರ್ಟಿನಲ್ಲಿದ್ದ ಕುಕ್ಕರ್ ನ ಮೇಲೆ ವೈಟ್ ಹಾಕುವ ಪ್ರಯತ್ನ ಶುರು ಮಾಡಿದ ಮಗರಾಯ.....
Subscribe to:
Posts (Atom)