ಹೀಗೆ ಒಂದು ದಿನ ನಾನು ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುತ್ತಾ ಇರುವುದನ್ನು ನೋಡಿದಾಗ ಧ್ರುವನಿಗೊಂದು ಸಂಶಯ ಹುಟ್ಟಿ ಕೇಳಿದ,
'ನಮ್ಮ ಮನೆಗೆ ಕೃಷ್ಣ ಬರಬಹುದಾ?'
ಕಯ್ಯಲ್ಲಿರುವ ಬೆಣ್ಣೆ ನೋಡಿ ಧ್ರುವನ ಮನಸ್ಸಲಿರುವ ಲಹರಿ ಏನೆಂದು ಊಹಿಸಲು ಸಾಧ್ಯವಾದರೂ, ಯಾಕೆ ಈ ಪ್ರಶ್ನೆ ಎಂದು ಅವನನ್ನೇ ಕೇಳಿದೆ.
ಆಗ ಅವನ ಉತ್ತರ , "ಈಗ ನಮ್ಮ ಮನೆಯಲ್ಲಿ ಬೆಣ್ಣೆ ಇದೆಯಲ್ಲ... ನಾವಿಲ್ಲದಿರುವಾಗ ಕೃಷ್ಣ ಬೆಣ್ಣೆ ಕದಿಯಲು ಬರಬಹುದಾ ..?!!"
Thursday, January 26, 2012
Subscribe to:
Posts (Atom)